‘ರಮಾ ಬಾಯಿ’ ಎಪ್ರಿಲ್ ೧೪ ರಂದು ತೆರೆಗೆ
Posted date: 13 Wed, Apr 2016 – 11:17:05 AM

ಇದೇ ಏಪ್ರಿಲ್ ೧೪, ೨೦೧೬ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೨೫ನೇ ಜನ್ಮ ದಿನೋತ್ಸವದ ಅಂಗವಾಗಿ ‘ರಮಾ ಬಾಯಿ’ ... ಮಿಸ್ಸೆಸ್ ಡಾ ಬಿ ಆರ್ ಅಂಬೇಡ್ಕರ್ (ಸಂವಿಧಾನ ಶಿಲ್ಪಿ) ಕನ್ನಡ ಸಿನಿಮಾ ಬಿಡುಗಡೆ ಆಗುತ್ತಿದೆ. ಆಡಿಟರ್ ಶ್ರೀನಿವಾಸ್ ಈ ಚಿತ್ರದ ನಿರ್ಮಾಪಕರು.
‘ರಮಾ ಬಾಯಿ’ಗೆ ೯ ವರ್ಷ ವಯಸ್ಸಿದ್ದಾಗ ೧೬ ನೇ ವರ್ಷದ ಭೀಮ ರಾವ್ (ಡಾ ಬಿ ಆರ್ ಅಂಬೇಡ್ಕರ್) ಅವರನ್ನು ವಿವಾಹವಾಗಿ ಕಿರಿಯ ವಯಸ್ಸಿನಲ್ಲೇ ಅಸುನೀಗಿದರು. ಈ ವನಿತೆಯ ಸಹನೆ, ತ್ಯಾಗ ಮನೋಭಾವ ಚಿತ್ರದ ಕೇಂದ್ರ ಬಿಂದು.
ಶ್ರೀಮತಿ ರಮಾ ಬಾಯಿ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅವರು ಅಭಿನಯಿಸಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಪಾತ್ರದಲ್ಲಿ ಸಿದ್ದರಾಮ್ ಕಾರಣಿಕ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕಥಾ ವಸ್ತು ಸಹ ಸಿದ್ದರಾಮ್ ಕಾರಣಿಕ ಅವರೇ ಒದಗಿಸಿರುವುದು.
ಎಂ ರಘುನಾಥ್ ಈ ‘ರಮಾ ಬಾಯಿ’ ಚಿತ್ರದ ನಿರ್ದೇಶಕರು. ಕೆ ಕಲ್ಯಾಣ್ ಅವರ ಸಂಗೀತ, ಗುರುದತ್ ಮುಸುರಿ ಅವರ ಛಾಯಾಗ್ರಹಣ ಒದಗಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed